  ಮೂಲದೊಡನೆ ಪರಿಶೀಲಿಸಿ

ಕಲಿಸ್ಟೊ : ಗುರುಗ್ರಹದ ೧೨ ಉಪಗ್ರಹಗಳ ಪೈಕಿ ಒಂದು. ಪ್ರಥಮ ಸಂಶೋಧಕ ಗೆಲಿಲಿಯೋ (೧೬೧೦). ಮುಂದಿನ ಯಾದಿ ಗುರು_ಕಲಿಸ್ಟೊ, ಭೂಮಿ_ಚಂದ್ರ ವ್ಯವಸ್ಥೆಗಳ ಕೆಲವು ವಿವರಗಳನ್ನು ತೋರಿಸುತ್ತದೆ.  
ಗಾತ್ರದ ದೃಷ್ಟಿಯಿಂದ ಇದಕ್ಕೆ ಗುರೂಪಗ್ರಹಗಳ ಪಂಕ್ತಿಯಲ್ಲಿ ಮಾತ್ರವಲ್ಲ ಸೌರವ್ಯೂಹದ ಉಪಗ್ರಹಗಳ  ಸಾಲಿನಲ್ಲೇ ಮೊದಲ ಮಣೆ. ಆದರೆ ಒಂದು ಉಪಗ್ರಹದ ವಿವರಗಳನ್ನು ಪರಿಶೀಲಿಸುವಾಗ ಮಾತೃಗ್ರಹದೊಡನೆ ಅದನ್ನು ತುಲನಿಸುವುದು ವಾಡಿಕೆ. ಕಲಿಸ್ಟೊ ಹಾಗೂ ಗುರು ವ್ಯಾಸಗಳ ಪ್ರಮಾಣ ೦.೦೪ಕ್ಕಿಂತಲೂ ಕಡಿಮೆ. ಚಂದ್ರನ ಹಾಗೂ ಭೂಮಿಯ ವ್ಯಾಸಗಳ ಪ್ರಮಾಣ ೦.೨೮. ಇದೇ ಪ್ರಕಾರ ಕಲಿಸ್ಟೊ ಹಾಗೂ ಗುರು ದ್ರವ್ಯರಾಶಿಗಳ ಪ್ರಮಾಣ ೦.೦೦೦೦೫ ; ಚಂದ್ರ ಹಾಗೂ ಭೂಮಿಗಳ ವ್ಯಾಸ ಪ್ರಮಾಣ ೦.೦೧. ಇಂಥ ತುಲನೆಗಳ ಅಭ್ಯಾಸ ಆಯಾ ಗ್ರಹ ಹಾಗೂ ಅದರ ಉಪಗ್ರಹಗಳ ಅಸ್ತಿತ್ವವನ್ನು ಕುರಿತು ಅಮೂಲ್ಯ ಪುರಾವೆಗಳನ್ನು ಒದಗಿಸುತ್ತದೆ. ಸೌರವ್ಯೂಹದ ಎಲ್ಲ ಉಪಗ್ರಹಗಳಲ್ಲೂ ಚಂದ್ರನ ಸ್ಥಾನ ವಿಶಿಷ್ಟವಾದದ್ದು ಎಂದು ತಿಳಿದದ್ದು ಈ ಕಾರಣದಿಂದ.
ವಿವರ 	ಕಲಿಸ್ಟೊ	ಚಂದ್ರ
ಸರಾಸರಿ ಕಾಂತಿ ಪರಿಮಾಣ 	೬.೩	ಹುಣ್ಣಿಮೆ_೧೨.೭
ಸಪ್ತಮಿ	_	೧೦.
ವ್ಯಾಸ (ಕಿಮೀ) 	೫,೧೮೦             ೩,೪೭೩
ಮಾತೃಗ್ರಹದಿಂದ ದೂರ 
(ಗ್ರಹತ್ರಿಜ್ಯಗಳಲ್ಲಿ)	೨೬.೩೬	೬೦
ನಾಕ್ಷತ್ರಿಕ ವರ್ಷ 
(ಮಾತೃ ಗ್ರಹವನ್ನು ಒಂದು ಸಲ
ಪರಿಭ್ರಮಿಸಲು ಬೇಕಾಗುವ 	೧೬ ದಿ. ೧೬ ಗಂ.	೨೭ ದಿ. ೭ ಗಂ. ೪೩ ಮಿ.
ಅವಧಿ                               	೩೨ ಮಿ. ೯ ಸೆ. 	೧೧.೫ ಸೆ.
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ